Friday, April 9, 2010

ನಯನ....

ನಯನ.... ನಿನ್ನ ಕಣ್ಣುಗಳನ್ನು ನೋಡುತ್ತಿದ್ದಂತೆಯೇ ನನ್ನ ಮನಸು ತಲ್ಲಣಗೊಳ್ಳುತ್ತದೆ. ಆ ನಿನ್ನ ಕಣ್ಣುಗಳನ್ನು ನೋಡುತ್ತಿದ್ದರೆ ನನ್ನನ್ನು ನಾನೇ ಮರೆತು ಬಿಡುತ್ತೇನೆ ನಯನ. ನೀನು ಗಮನಿಸಿರಬಹುದು ಬೊಮ್ಮನಹಳ್ಳಿಯಲ್ಲಿ ಆಫಿಸಿನಲ್ಲಿ ಕರೆಂಟ್ ಹೋಗಿ ಕೆಲಸವಿಲ್ಲದೆ ಖಾಲಿ ಕುಳಿತಾಗ ನಿನ್ನ ಕಣ್ಣುಗಳನ್ನು ನೋಡಲೆಂದೇ ನಾನು ನಿನ್ನನ್ನೇ ನೋಡುತ್ತಿದ್ದೆ. ನೀನು ನನ್ನನ್ನು ನೋಡಿದ ತಕ್ಷಣ ಮುಗುಳುನಗೆಯೊಂದನ್ನು ಬಿರುತ್ತಿದ್ದೆ, ಆ ನಗುವನ್ನು ಸ್ವೀಕರಿಸಿದ ನನ್ನ ಗಂಟಲು ಹೃದಯಗಳೆರಡು ಒಣಗಿ ಹೋಗುತ್ತಿದ್ದವು. ನನಗಿನ್ನೂ ಚೆನ್ನಾಗಿ ನೆನಪಿದೆ, ಒಂದು ದಿನ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿ ಬರುವಾಗ ಬಸ್ಸಿನಲ್ಲಿ ಯಾವ ಸಿತು ಖಾಲಿ ಇರಲಿಲ್ಲ. ನನ್ನ ಪಕ್ಕದಲ್ಲಿ ಒಂದು ಸಿತು ಬಿಟ್ಟರೆ, ಇನ್ನೊಂದು ಖಾಲಿ ಇತ್ತು ಅದರಲ್ಲಿ ಯಾರೋ ಒಬ್ಬ ಗಂಡಸು ಕುಳಿತಿದ್ದ. ಅಲ್ಲಿ ಕುಳಿತುಕೋ ಎಂದು ನಾನು ಮೂರೂ ಸಲ ಸನ್ನೆ ಮಾಡಿದರು ನೀನು ಕುಳಿತುಕೊಳ್ಳಲಿಲ್ಲ, ಕೊನೆಗೆ ನನ್ನ ಪಕ್ಕದಲ್ಲಿಯೇ ಕುಳಿತುಕೊಳ್ಳಲು ಕರೆದಾಗ ಹಿಂದು ಮುಂದು ನೋಡದೆ ಬಂದು ಕುಳಿತುಬಿಟ್ಟೆ. ಇದರಿಂದ ನೀನು ನನ್ನನ್ನು ಇಷ್ಟ ಪಡುತ್ತಿ ಎಂದುಕೊಂಡಿದ್ದೇನೆ. ನಾನಂತು ನಿನ್ನನ್ನು ಯಾವತ್ತೋ ಇಷ್ಟಪಟ್ಟು ಬಿಟ್ಟೆ. ನಿನಗೆ ಹೇಳಲಾಗದೆ ಒದ್ದಾಡುತ್ತಿದ್ದೇನೆ. ಹಾಗಾಗಿಯೇ ನನ್ನ ಅಂತರಾಳವನ್ನು ಈ ವೆಬ್ ಸೈಟ್ನಲ್ಲಿ ಬಿಚ್ಚಿಟ್ಟಿದ್ದೇನೆ. ಹಾಗು ನಿನ್ನಿಂದ ಯಾವುದಾದರು ಉತ್ತರ ಬರುವುದೆಂದು ಕಾಯುತ್ತಿದ್ದೇನೆ.

No comments:

Post a Comment